100.The Chargers

  1. ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ
  2. ಅವು ಕಿಡಿ ಹಾರಿಸುತ್ತವೆ
  3. ಮುಂಜಾವಿನ ಹೊತ್ತು ಅವು ಧಾಳಿ ಮಾಡಿ ಬಿಡುತ್ತವೆ
  4. ಅವು ಧೂಳೆಬ್ಬಿಸಿ ಬಿಡುತ್ತವೆ
  5. ಮತ್ತು ಶತ್ರುಗಳ ಪಡೆಗಳೊಳಗೆ ನುಗ್ಗಿ ಬಿಡುತ್ತವೆ
  6. ಮನುಷ್ಯನು ಖಂಡಿತ ತನ್ನ ಒಡೆಯನಿಗೆ ಕೃತಘ್ನನಾಗಿದ್ದಾನೆ
  7. ಇದಕ್ಕೆ ಖಂಡಿತ ಅವನೇ ಸಾಕ್ಷಿಯಾಗಿದ್ದಾನೆ
  8. ಅವನು ಸಂಪತ್ತನ್ನು ತುಂಬಾ ಪ್ರೀತಿಸುತ್ತಾನೆ
  9. ಅವನಿಗೆ ತಿಳಿದಿಲ್ಲವೇ, ಗೋರಿಗಳೊಳಗೆ ಇರುವವರನ್ನೆಲ್ಲಾ ಹೊರ ತೆಗೆಯಲಾಗುವ ದಿನದ ಕುರಿತು
  10. ಮತ್ತು ಮನಸ್ಸುಗಳೊಳಗೆ ಇರುವ ಎಲ್ಲವನ್ನೂ ಪ್ರಕಟ ಪಡಿಸಲಾಗುವ ದಿನದ ಕುರಿತು
  11. ಅಂದು ಅವರ ಒಡೆಯನು ಖಂಡಿತ ಅವರ ಕುರಿತು ಎಲ್ಲವನ್ನೂ ಬಲ್ಲವನಾಗಿರುವನು