104.The Traducer

  1. ವಿನಾಶಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ
  2. ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ
  3. ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ
  4. ಖಂಡಿತ ಇಲ್ಲ. ನಿಜವಾಗಿ ಅವನು ‘ಹುತಮಃ’ದಲ್ಲಿ ಎಸೆಯಲ್ಪಡುವನು
  5. ಮತ್ತು, ‘ಹುತಮಃ’ ಅಂದರೇನೆಂದು ನಿಮಗೇನು ಗೊತ್ತು
  6. ಅದು ಅಲ್ಲಾಹನು ಉರಿಸಿದ ಬೆಂಕಿ
  7. ಅದು ಹೃದಯಗಳನ್ನೂ ತಲುಪುವುದು
  8. ಅದನ್ನು ಅವರ ಮೇಲೆ ಮುಚ್ಚಿಬಿಡಲಾಗುವುದು
  9. ಉದ್ದದ ಸ್ತಂಭಗಳ ರೂಪದಲ್ಲಿ