107.Almsgiving

  1. ನೀವು ಕಂಡಿರಾ, ಪ್ರತಿಫಲದ ದಿನ ಸುಳ್ಳೆಂದು ತಿರಸ್ಕರಿಸುವಾತನನ್ನು
  2. ಅವನೇ, ಅನಾಥನನ್ನು ದೂರ ದಬ್ಬುವವನು
  3. ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು
  4. ಇನ್ನು, ಇಂತಹ ನಮಾಝಿಗಳಿಗೆ ಶಾಪವಿದೆ
  5. ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ
  6. ಅವರು ಡಂಬಾಚಾರ ಮಾಡುತ್ತಾರೆ
  7. ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ