111.The Palm Fibre

  1. ಮುರಿದು ಹೋದವು, ಅಬೂಲಹಬ್‌ನ ಎರಡೂ ಕೈಗಳು ಮತ್ತು ಅವನು ನಾಶವಾದನು
  2. ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ
  3. ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು
  4. ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ
  5. ಅವಳ ಕೊರಳಲ್ಲಿ ಖರ್ಜೂರದೆಲೆಯ ಪಾಶವಿರುವುದು